ಅಹೋಬಲ
ಕರ್ನೂಲು ಜಿಲ್ಲೆಯಲ್ಲಿದೆ. ನರಸಿಂಹ ಕ್ಷೇತ್ರಗಳಲ್ಲಿ ಮುಖ್ಯವಾದದ್ದು. ಉಗ್ರನರಸಿಂಹ ದೇವಾಲಯ ಮೇಲಿನ ಬೆಟ್ಟದಲ್ಲಿದೆ.  ವಿಗ್ರಹ ಸ್ವಯಂಭುವಾಗಿದ್ದು ದೊಡ್ಡ ಬಂಡೆಯ ಬಿರುಕಿನ ಮೇಲೆ ನಿಂತಿದೆ. ಆ ಬಿರುಕು ಹಿರಣ್ಯಕಶಿಪುವಿನ ಹೊಟ್ಟೆ ಸೀಳಿದ ಚಿಹ್ನೆ.  ವಿಗ್ರಹಕ್ಕೆ ಹತ್ತು ಕೈಗಳಿವೆ.  ಕೆಳಗಿನ ಬೆಟ್ಟದಲ್ಲಿರುವ ಸೌಮ್ಯನರಸಿಂಹ (ಲಕ್ಷ್ಮೀನರಸಿಂಹ) ಪ್ರಹ್ಲಾದವರದ.		
   
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ